ಆಖ್ಯಾಯಿಕಾ 
ಪ್ರಾಯಃ ಆಖ್ಯಾನದಿಂದ ಬಂದಿದೆ. ಸಂಸ್ಕøತದಲ್ಲಿ ಒಂದು ಬಗೆಯ ಗದ್ಯರಚನೆ; ಕಥಾ ಎಂಬುದು ಮತ್ತೊಂದು. ವಕ್ತ್ರ, ಅಪರವಕ್ತ್ರ ಛಂದಸ್ಸುಗಳಲ್ಲಿ ರಚಿತವಾಗಿರುವ ಕೆಲವು ಶ್ಲೋಕಗಳಿಂದ ಕೂಡಿರುತ್ತದೆ. ರಾಜಾದಿ ಪ್ರಸಿದ್ಧ ವ್ಯಕ್ತಿಗಳ ಮಹತ್ತ್ವದ ವಿಚಾರವನ್ನು ಕುರಿತು ಐತಿಹಾಸಿಕಾಂಶಗಳನ್ನೊಳಗೊಂಡಿರುವಂತೆ ಕವಿ ನಿರ್ಮಿತವಾದ ಗದ್ಯಕಾವ್ಯ ಶೃಂಗಾರಯುಕ್ತವಾಗಿರುತ್ತವೆ. ಇದರಲ್ಲಿ ನಾಯಕನೇ ತನ್ನ ಚರಿತ್ರೆಗಳನ್ನು ಒಂದೊಂದಾಗಿ ಹೇಳಿಕೊಳ್ಳುತ್ತಾನೆ: ಉಚ್ಛ್ವಾಸವೆಂಬ ಹೆಸರಿನ ಹಲವು ಭಾಗಗಳಿರುತ್ತವೆ. ಇದಕ್ಕೂ ಕಥಾ ಎಂಬುದಕ್ಕೂ ಭೇದವಿಲ್ಲವೆಂದು ಕೆಲವು ಅಲಂಕಾರಿಕರ ಮತ.						
(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ